ಹೊಸ ವಾಹನದ ದೀರ್ಘಾವಧಿಯ ವಾಹನ ವಿಮೆಯನ್ನು ಹಿಂಪಡೆದ ವಾಹನ ವಿಮಾ ಪ್ರಾಧಿಕಾರ.

ಆಗಸ್ಟ್ ೧ ರಿಂದ ಜಾರಿಗೆ ಬರುವಂತೆ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತಂದಿದೆ.

Aug 2, 2020 - 03:02
Aug 2, 2020 - 03:05
 0  490
ಹೊಸ ವಾಹನದ ದೀರ್ಘಾವಧಿಯ ವಾಹನ ವಿಮೆಯನ್ನು ಹಿಂಪಡೆದ ವಾಹನ ವಿಮಾ ಪ್ರಾಧಿಕಾರ.

ಮಹತ್ವದ ಕ್ರಮದಲ್ಲಿ ವಿಮಾ ನಿಯಂತ್ರಣ ಮತ್ತು ಪ್ರಾಧಿಕಾರ ನಿಗಮ ಹೊಸ ದ್ವಿಚಕ್ರ ವಾಹನದ ಮೇಲಿನ ಐದು ವರ್ಷಗಳ ಹಾಗೂ ಖಾಸಗಿ ಕಾರಿನ ಮೇಲಿನ ಮೂರು  ವರ್ಷಗಳ ವಿಮೆಯನ್ನು ಹಿಂಪಡೆದುಕೊoಡಿದೆ.
ಆಗಸ್ಟ್ 1  ರಿಂದ ಜಾರಿಗೆ ಬರುವಂತೆ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತಂದಿದೆ.

ಸೆಪ್ಟoಬರ್ 2018  ರಂದು ವಿಮಾ ನಿಗಮ ದೀರ್ಘ ಕಾಲದ ವಿಮೆಯನ್ನು ಪ್ರಸ್ತುತ ಪಡೆಸಿದರೂ,ಈ ಪೊಲಿಸಿಗಳ ಕಾರ್ಯಕ್ಷಮತೆಯಲ್ಲಿನ ಕೆಲವು ಸಮಸ್ಯೆ ಮತ್ತು ಕಾಳಜಿಗಳನ್ನು ವಿಮಾ ನಿಗಮ ಗಮನಿಸಿದ್ದರಿಂದ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಈ ಹೊಸ ನಿರ್ಧಾರವು ಈಗ ಜನರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಖಾಸಗಿ ವಿಮಾ ಕಂಪನಿಯಲ್ಲಿ  ಶಾಖಾಧಿಕಾರಿಯಾಗಿರುವ ಆರುಣ್ ರಾಜ್ ಅವರು ಹೇಳಿಕೊಂಡಿದ್ದಾರೆ. 
ಹಿಂದೆ ವಾಹನ ವಿಮಾ ಕಂಪನಿಯ ಸೇವೆಯಲ್ಲಿ ಗ್ರಾಹಕರು ಸಂತೃಪ್ತರಾಗದಿದ್ದರೆ ಬೇರೆ ಗತ್ಯಂತರ ಇಲ್ಲದೆ ಅದೇ ಕಂಪನಿಯಲ್ಲಿ ಐದು ವರ್ಷ( ದ್ವಿಚಕ್ರ ವಾಹನ) ಹಾಗೂ ಮೂರು ವರ್ಷ(ಖಾಸಗಿ ಕಾರಿನ) ಗಳ ವಿಮೆಯನ್ನು ಮುಂದುವರೆಸಲು ಗಾಹಕರು ನಿರ್ಭಂದರಾಗುತ್ತಿದ್ದರು. ಕ್ಲೇಂ ಬೋನಸ್‌ನಲ್ಲಿರುವ ಗೊಂದಲ ಹಾಗೂ ಏಕರೂಪತೆಯ ಕೊರತೆಯು ಗ್ರಾಹರನ್ನು ಇನ್ನುಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿತ್ತು.ಅದು ಮಾತ್ರವಲ್ಲದೇ ಇದು ಹೊಸ ವಾಹನ ಖರೀದಿಸುವ ಸಂರ್ಧಬದಲ್ಲಿ ದುಭಾರಿಯೆನಿಸುತ್ತಿತು.

ವಿಮಾ ಪ್ರಾಧಿಕಾರದ ಈ ಮಹತ್ವದ ನಿರ್ಧಾರದಿಂದ ಇದೆಲ್ಲಾ ಸಮಸ್ಯೆಗೆ ಪರಿಹಾರ ದೊರಕಿದಂತಾಯಿತು.

What's Your Reaction?

like

dislike

love

funny

angry

sad

wow